ಉಚಿತವಾಗಿ ಆಕ್ಸಿಜನ್ ನೀಡಲು ಮುಂದಾದ ಗೌತಮ್ ಗಂಭೀರ್

ನವದೆಹಲಿ| Krishnaveni K| Last Modified ಭಾನುವಾರ, 2 ಮೇ 2021 (09:37 IST)
ನವದೆಹಲಿ: ದೆಹಲಿಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ಉಂಟಾಗಿರುವ ಬೆನ್ನಲ್ಲೇ ದೆಹಲಿ ಸಂಸದ, ಮಾಜಿ ಕ್ರಿಕೆಟಿಗರ ಗೌತಮ್ ಗಂಭಿರ್ ಉಚಿತವಾಗಿ ಆಕ್ಸಿಜನ್ ಕನ್ಸಂಟ್ರೇಟಟರ್ ಗಳನ್ನು ನೀಡಲು ಮುಂದಾಗಿದ್ದಾರೆ.

 
ದೆಹಲಿಯ ಕೊರೋನಾ ಪೀಡಿತರಿಗಾಗಿ ಸುಮಾರು 200 ಆಕ್ಸಿಜನ್ ಕನ್ಸಂಟ್ರೇಟರ್ ಗಳನ್ನು ಉಚಿತವಾಗಿ ವಿತರಿಸುವುದಾಗಿ ಗಂಭೀರ್ ಘೋಷಿಸಿದ್ದಾರೆ. ಇದನ್ನು ತಮ್ಮ ಸ್ವಯಂ ವೆಚ್ಚದಿಂದ ಅವರು ಭರಿಸುತ್ತಿದ್ದಾರೆ.
 
ದೆಹಲಿಯಲ್ಲಿ ಕೊರೋನಾ ಪ್ರಕರಣ ಮಿತಿ ಮೀರಿರುವಾಗ ಇಲ್ಲಿನ ಸಂಸದರಾಗಿರುವ ಗಂಭೀರ್ ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಟೀಕೆಗಳ ಬೆನ್ನಲ್ಲೇ ಗಂಭೀರ್ ಈ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರಿಗಾಗಿ ಈ ನೆರವು ನೀಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :