Widgets Magazine

ವಿರಾಟ್ ಕೊಹ್ಲಿ ಆಯ್ತು, ಇದೀಗ ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಗೌತಮ್ ಗಂಭೀರ್ ಹೇಳಿಕೆ

ನವದೆಹಲಿ| Krishnaveni K| Last Modified ಭಾನುವಾರ, 31 ಮಾರ್ಚ್ 2019 (09:00 IST)
ನವದೆಹಲಿ: ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕರಾಗಲು ಲಾಯಕ್ಕಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
 
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದನ್ನು ನೋಡಿ ಗಂಭೀರ್ ಅವರನ್ನು ಭಾರತ ಕಂಡ ಅತ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂದು ಹೊಗಳಿದ್ದಾರೆ.
 
ಗಂಭೀರ್ ಗೆ ತಾನು ಟೀಂ ಇಂಡಿಯಾದಲ್ಲಿ ಕಡೆಗಣಿಸಲ್ಪಟ್ಟಿದ್ದಕ್ಕೆ ಧೋನಿಯೇ ಕಾರಣ ಎಂಬ ಸಿಟ್ಟಿದೆ. ಅದಕ್ಕೇ ಆಗಾಗ ಧೋನಿಗೆ ಟಾಂಗ್ ಕೊಡುತ್ತಾರೆ. ಈಗ ಸಂಜು ಸ್ಯಾಮ್ಸನ್ ನ್ನು ಹೊಗಳಿ ಪರೋಕ್ಷವಾಗಿ ಧೋನಿಗೆ ಟಾಂಗ್ ಕೊಟ್ಟಿದ್ದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
 
ನಿಮಗೆ ಧೋನಿ ಬಗ್ಗೆ ಅದೆಷ್ಟು ಹೊಟ್ಟೆ ಕಿಚ್ಚು ಎಂದು ಕೆಲವರು ಲೇವಡಿ ಮಾಡಿದ್ದರೆ, ಇನ್ನು ಕೆಲವರು ಧೋನಿ ಎಂಬ ವ್ಯಕ್ತಿಯ ಬಗ್ಗೆ ಯಾವತ್ತಾದರೂ ಹೆಸರು ಕೇಳಿದ್ದೀರಾ ಎಂದು ಕಾಲೆಳೆದಿದ್ದಾರೆ. ಬೇಕೆಂದೇ ಧೋನಿಯನ್ನು ಅವಮಾನ ಮಾಡಲು ಹೀಗೆ ಹೇಳ್ತಿದ್ದೀರಾ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :