ನವದೆಹಲಿ: ಭಾರತದ ನೆಲದಲ್ಲಿದ್ದುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ಗೆಲುವನ್ನು ಸಂಭ್ರಮಿಸಿದ ಕಾಶ್ಮೀರ ಪ್ರತ್ಯೇಕತವಾದಿ ಸಂಘಟನೆ ಹುರಿಯತ್ ಮುಖ್ಯಸ್ಥ ಮಿರ್ ವಾಯಿಸ್ ಉಮರ್ ಫಾರುಖ್ ಗೆ ಕ್ರಿಕೆಟಿಗ ಗೌತಮ್ ಗಂಭೀರ್ ತಪರಾಕಿ ನೀಡಿದ್ದಾರೆ. ನಿನ್ನೆ ಭಾರತ ತಂಡದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ಭರ್ಜರಿಯಾಗಿ ಗೆಲುವು ಕಂಡಿತ್ತು. ಈ ಹಿನ್ನಲೆಯಲ್ಲಿ ಹುರಿಯತ್ ಮುಖ್ಯಸ್ಥ ಉಮರ್ ಟ್ವಿಟರ್ ನಲ್ಲಿ ಶುಭಾಷಯ ಕೋರಿದ್ದರು. ಎಲ್ಲಾ ಕಡೆ ಪಟಾಕಿ ಸದ್ದು ಕೇಳಿಸುತ್ತಿದೆ.