ಕ್ರಿಕೆಟ್ ನ ‘ಡಾನ್’ ಬ್ರಾಡ್ಮನ್ ಗೆ ಗೂಗಲ್ ಗೌರವ

ನವದೆಹಲಿ, ಸೋಮವಾರ, 27 ಆಗಸ್ಟ್ 2018 (10:18 IST)

ನವದೆಹಲಿ: ಕ್ರಿಕೆಟ್ ನ ಆಲ್ ಟೈಮ್ ದಿಗ್ಗಜ ಡಾನ್ ಬ್ರಾಡ್ಮನ್ ಜನ್ಮದಿನಕ್ಕೆ ಗೂಗಲ್ ವಿಶಿಷ್ಟ ಗೌರವ ನೀಡಿದೆ. ತನ್ನ ಮುಖಪುಟದಲ್ಲೇ ಡಾನ್ ಫೋಟೋ ಹಾಕಿ ಗೌರವ ನೀಡಿದೆ.
 
ಇನ್ನು, ಕ್ರಿಕೆಟ್ ದಿಗ್ಗಜನ ಹುಟ್ಟುಹಬ್ಬಕ್ಕೆ ಕ್ರಿಕೆಟ್ ಜಗತ್ತೇ ಶುಭಾಶಯ ಕೋರುತ್ತಿದೆ. ಆಸ್ಟ್ರೇಲಿಯಾ ಮೂಲದ ಬ್ರಾಡ್ಮನ್ 1908 ರಲ್ಲಿ ಜನಿಸಿದ್ದರು. ಇದು ಅವರ 110 ನೇ ಜನ್ಮ ದಿನ.  ಅಂದಿನ ಕಾಲದಲ್ಲೇ ಕ್ರಿಕೆಟ್ ನ ಹಲವು ದಾಖಲೆಗಳನ್ನು ಮಾಡಿ ಡಾನ್ ಎನಿಸಿಕೊಂಡಿದ್ದ ಬ್ರಾಡ್ಮನ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶೇಷವಾಗಿ ಶುಭ ಕೋರಿದ್ದಾರೆ.
 
ಬ್ರಾಡ್ಮನ್ ನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಸಚಿನ್ ತಾವು ಅವರ 90 ನೇ ಜನ್ಮ ದಿನದಂದು ಭೇಟಿ ಮಾಡಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅವರನ್ನು, ಅವರ ಭೇಟಿಯ ಕ್ಷಣಗಳನ್ನು ಇಂದಿಗೂ ಸ್ಮರಿಸುವೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಗಾಗಿ ಹೋರಾಡುವ ಕೆಲವು ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿದ್ದಾರಂತೆ!

ಲಂಡನ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯವನ್ನು ಗೆದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಮೆಚ್ಚುಗೆ ...

news

ಪಾಕಿಸ್ತಾನದ ಪತ್ರಕರ್ತ ಅಭಿಮಾನಿಗೆ ಅಂಗಿ ಬಿಚ್ಚಿ ಕೊಟ್ಟ ವಿರಾಟ್ ಕೊಹ್ಲಿ!

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ...

news

ತೃತೀಯ ಟೆಸ್ಟ್ ಸೋತ ಬೆನ್ನಲ್ಲೇ ಹೊಸ ತಂಡ ಘೋಷಿಸಿದ ಇಂಗ್ಲೆಂಡ್

ಲಂಡನ್: ಭಾರತದ ವಿರುದ್ಧ ಸರಣಿಯ ಮುಂದಿನ ಪಂದ್ಯಗಳಿಗೆ ಇಂಗ್ಲೆಂಡ್ 14 ಸದಸ್ಯರ ತಂಡ ಘೋಷಣೆ ಮಾಡಿದ್ದು, ...

news

2019 ರ ವಿಶ್ವಕಪ್ ಗೆಲ್ಲುವವರು ನಾವೇ ಎಂದ ಪಾಕ್ ಕ್ರಿಕೆಟಿಗ

ಇಸ್ಲಾಮಾಬಾದ್: 2019 ರ ವಿಶ್ವಕಪ್ ಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಇದರ ಬೆನ್ನಲ್ಲೇ ಪಾಕಿಸ್ತಾನ ...