ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಶ್ರೀಲಂಕಾ ತಂಡದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ನಂತರ ವಿವಾದವಾಗುವ ಲಕ್ಷಣ ತೋರುತ್ತಿದ್ದಂತೆ ಅಳಿಸಿ ಹಾಕಿದ್ದಾರೆ. ಶ್ರೀಲಂಕಾ ಮತ್ತು ಭಾರತ ನಡುವೆ ನ.16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಲಂಕಾ ಬ್ಯಾಟ್ಸ್ ಮನ್ ದಿಮುತು ಕರುಣರತ್ನೆ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯನ್ನು ಸೂಕ್ತ ರಣತಂತ್ರದೊಂದಿಗೆ ಎದುರಿಸಿದರೆ ರನ್ ಗಳಿಸಲು ಕಷ್ಟವಾಗದು