ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ 4 ಕೋಟಿ ಪಂಗನಾಮ!

ಚೆನ್ನೈ| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (11:12 IST)
ಚೆನ್ನೈ: ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮಗೆ ಚೆನ್ನೈ ಮೂಲದ ಉದ್ಯಮಿಯೊಬ್ಬರಿಂದ 4 ಕೋಟಿ ವಂಚನೆಯಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
 

2015 ರಲ್ಲಿ ಚೆನ್ನೈ ಮೂಲದ ಜಿ ಮಹೇಶ್ ಎಂಬಾತನಿಗೆ 4 ಕೋಟಿ ರೂ. ಸಾಲ ನೀಡಿದ್ದ ಭಜಿಗೆ ಹಣ ವಾಪಸಾಗಿರಲಿಲ್ಲ. ಹಲವು ಬಾರಿ ಕೇಳಿದ ಬಳಿಕ ಇತ್ತೀಚೆಗೆ ಉದ್ಯಮಿ ಮಹೇಶ್ 25 ಲಕ್ಷ ರೂ.ಗಳ ಚೆಕ್ ನೀಡಿದ್ದ. ಆದರೆ ಅದು ಬೌನ್ಸ್ ಆಗಿದೆ. ಹೀಗಾಗಿ ಭಜಿ ಚೆನ್ನೈನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆರೋಪಿ ಮಹೇಶ್ ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :