ನವದೆಹಲಿ: ಕ್ರಿಕೆಟಿಗ ಹರ್ಭಜನ್ ಸಿಂಗ್ ಹಿಂದಿ ಹೇರಿಕೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿ ಜತೆ ಈ ವಿಚಾರವಾಗಿ ಭಜಿ ಜಟಾಪಟಿ ನಡೆಸಿದ್ದಾರೆ. ಇದೆಲ್ಲಾ ಪ್ರಾರಂಭವಾಗಿದ್ದು ವಿರಾಟ್ ಕೊಹ್ಲಿ ಹಾಕಿದ ಒಂದು ಫೋಟೋದಿಂದ. ನಾನೊಂದು ಹೊಸ ಸ್ಪೀಕರ್ ಕೊಂಡು ಕೊಂಡೆ ಎಂದು ಕೊಹ್ಲಿ ಫೋಟೋ ಹಾಕಿದ್ದರು. ಇದಕ್ಕೆ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದ ಭಜಿ ಸೆಂಡ್ ಮಿ ಒನ್ ಎಂದಿದ್ದರು.ಭಜಿ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದನ್ನು ನೋಡಿ ಸುಗೇಶ್ ಪಥಿ ಎಂಬಾತ ಕೊನೆಗೂ