ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಏಕಾಂಗಿಯಾಗಿ ಭಾರತದ ಪರ ರನ್ ಸಿಡಿಸುತ್ತಿದ್ದ ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜಾ ಮಾಡಿದ ತಪ್ಪಿನಿಂದ ರನೌಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಹಾರ್ದಿಕ್ ಪಾಂಡ್ಯ ಜಡೇಜಾ ಮೇಲೆ ಅಸಮಾಧಾನ ಸೂಚಿಸುತ್ತಲೇ ಹೊರ ನಡೆದಿದ್ದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಮೆಸೇಜ್ ಮಾಡಿದ್ದರು.ನಮ್ಮನ್ನು ನಾವೇ ಕೊಳ್ಳೆ ಹೊಡೆದುಕೊಂಡೆವು. ಇತರರಿಗೆ ಆ ಸಾಮರ್ಥ್ಯವಿಲ್ಲ ಎಂದು