ಮುಂಬೈ: ಖಾಸಗಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ತಪ್ಪಿಗೆ ನಿಷೇಧಕ್ಕೊಳಗಾಗಿರುವ ಹಾರ್ದಿಕ್ ಪಾಂಡ್ಯ ಬಗ್ಗೆ ಅವರ ಮಾಜಿ ಪ್ರೇಯಸಿ ಎಲ್ಲಿ ಅವ್ರಾಮ್ ಪ್ರತಿಕ್ರಿಯಿಸಿದ್ದಾರೆ.ಹಾರ್ದಿಕ್ ನ ಈ ಮುಖ ನಾನು ನೋಡಿಯೇ ಇರಲಿಲ್ಲ. ನನಗೆ ಗೊತ್ತಿರುವ ಹಾರ್ದಿಕ್ ಇವರಾಗಿರಲಿಲ್ಲ ಎಂದು ಎಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಡೀ ಪ್ರಕರಣ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗುವುದು ಬಹಳ ಅಪರೂಪ. ಅದರಲ್ಲೂ ಒಬ್ಬ ಕ್ರಿಕೆಟಿಗನಾಗಿ ಅವರನ್ನು ಹಲವು ಯುವಕರು