ಮುಂಬೈ: ಭಾರತೀಯ ಕ್ರಿಕೆಟ್ ನಲ್ಲಿ ಇದೀಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರದ್ದೇ ಹವಾ. ಬ್ಯಾಟಿಂಗ್ ಗೂ ಸೈ, ಬೌಲಿಂಗ್ ಗೂ ಸೈ ಎನ್ನುವ ಇಂತಹ ಆಟಗಾರನನ್ನು ತನ್ನ ಬುಟ್ಟಿಯೊಳಗೆ ಹಾಕಲು ಐಪಿಎಲ್ ಫ್ರಾಂಚೈಸಿಗಳು ಹೊಂಚು ಹಾಕಿವೆ. ಎರಡು ವರ್ಷಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೇವಲ 10 ಲಕ್ಷ ರೂ. ಗೆ ಹರಾಜಾಗಿದ್ದ ಪಾಂಡ್ಯ ಈ ವರ್ಷ ಹೊಸದಾಗಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ