ಮುಂಬೈ: ಬೆನ್ನು ನೋವಿನ ಕಾರಣಕ್ಕೆ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.ಇದೀಗ ವೈದ್ಯರು ಬೆನ್ನಿನ ಮಾಂಸ ಖಂಡ ಬಲಗೊಳಿಸುವಂತೆ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ. ಅಲ್ಲದೆ, ಮೂರು ವಾರಗಳ ವಿಶ್ರಾಂತಿಗೂ ಸೂಚಿಸಿದ್ದಾರೆ. ಹೀಗಾಗಿ ಎನ್ ಸಿಎಯಲ್ಲಿ ಮೂರು ವಾರಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.ಐಪಿಎಲ್ ಕ್ರಿಕೆಟ್ ಮಾರ್ಚ್ 23 ರಿಂದ ಪ್ರಾರಂಭವಾಗಲಿದ್ದು, ಆ ವೇಳೆಗೆ ಸಂಪೂರ್ಣ ಫಿಟ್ ಆಗದೇ ಹೋದಲ್ಲಿ ವಿಶ್ವಕಪ್ ದೃಷ್ಟಿಯಿಂದ