ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಆಗಾಗ ವಿನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ, ಕೊಹ್ಲಿ, ಜಡೇಜಾ ನಂತರ ಇದೀಗ ಹಾರ್ದಿಕ್ ಪಾಂಡ್ಯ ಹೊಸ ಕೇಶ ವಿನ್ಯಾಸ ಮಾಡಿದ್ದು, ಟ್ರೆಂಡ್ ಸೃಷ್ಟಿಸುತ್ತಿದೆ.ಈ ಹಿಂದೆ ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಕೂದಲಿಗೆ ಹೊಸ ವಿನ್ಯಾಸ ನೀಡಿದ್ದ ಹೇರ್ ಸ್ಟೈಲಿಶ್ ಹಕೀಂ ಆಲಿಂ ಹಾರ್ದಿಕ್ ಗೆ ಈ ಹೊಸ ಲುಕ್ ಕೊಟ್ಟಿದ್ದಾರೆ. ಇದನ್ನು ಸ್ವತಃ ಪಾಂಡ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.