ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಕ್ಕೆ ಧೋನಿ ಏನು ಹೇಳಿದರು ಎಂದು ಬಹಿರಂಗಪಡಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ, ಶನಿವಾರ, 20 ಏಪ್ರಿಲ್ 2019 (06:22 IST)

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿ ಎದುರೇ ಅವರ ಟ್ರೇಡ್ ಮಾರ್ಕ್ ಹೊಡೆತ ಹೆಲಿಕಾಪ್ಟರ್ ಶಾಟ್ ಹೊಡೆದಿದ್ದ ಮುಂಬೈ ಇಂಡಿಯನ್ಸ್ ಆಟಗಾರ ಆವತ್ತು ಧೋನಿ ಏನು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.


 
ಹೆಲಿಕಾಪ್ಟರ್ ಶಾಟ್ ಹೊಡೆದ ತಕ್ಷಣ ಧೋನಿ ಏನಾದರೂ ಪ್ರತಿಕ್ರಿಯಿಸಬಹುದು ಎಂದು ನಿರೀಕ್ಷಿಸಿದ್ದೆ ಎಂದು ಪಾಂಡ್ಯ ಆವತ್ತು ಹೇಳಿದ್ದರು. ಆದರೆ  ಆಗ ಧೋನಿ ಏನೂ ಹೇಳಿರಲಿಲ್ಲ.
 
ಆದರೆ ಪಂದ್ಯದ ಬಳಿಕ ಧೋನಿಯ ಅಭಿಪ್ರಾಯ ಕೇಳಿಯೇ ತೀರುತ್ತೇನೆಂದು ಹಾರ್ದಿಕ್ ಸೀದಾ ಚೆನ್ನೈ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರಂತೆ. ಬಳಿಕ ಧೋನಿ ಬಳಿ ನನ್ನ ಹೆಲಿಕಾಪ್ಟರ್ ಶಾಟ್ ಹೇಗಿತ್ತು ಎಂದು ಕೇಳಿದ್ದರಂತೆ. ಅದಕ್ಕೆ ಧೋನಿ ‘ಚೆನ್ನಾಗಿತ್ತು’ ಎಂದಿದ್ದರು ಎಂದು ಹಾರ್ದಿಕ್ ಸ್ಮರಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಗೆ ಆಯ್ಕೆಯಾಗದೆ ಬೇಸರದಲ್ಲಿರುವ ಅಂಬಟಿ ರಾಯುಡು ಬೆಂಬಲಕ್ಕೆ ಬಂದ ಪ್ರಗ್ಯಾನ್ ಓಝಾ

ಮುಂಬೈ: ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಅಂಬಟಿ ರಾಯುಡು ಇತ್ತೀಚೆಗೆ ಟ್ವೀಟ್ ಮೂಲಕ ...

news

ಐಪಿಎಲ್: ಆಂಡ್ರೆ ರಸೆಲ್ ಅಬ್ಬರಕ್ಕೆ ಬ್ರೇಕ್ ಹಾಕಿದ ಆರ್ ಸಿಬಿ

ಕೋಲ್ಕೊತ್ತಾ: ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ ...

news

ಯಾಕೆ ಎಲ್ಲರೂ ಧೋನಿ ಹಿಂದೆ ಬೀಳ್ತಾರೆ ಅಂತ ಗೊತ್ತಾಗಲ್ಲ ಎಂದ ವಿರಾಟ್ ಕೊಹ್ಲಿ

ನವದೆಹಲಿ: ಈಗಲೂ ಟೀಂ ಇಂಡಿಯಾಗೆ ಅನಧಿಕೃತ ಕ್ಯಾಪ್ಟನ್ ಆಗಿರುವ ಧೋನಿ ಒಂದೇ ಒಂದು ತಪ್ಪು ಮಾಡಿದರೂ ಅವರನ್ನು ...

news

2019 ರ ವಿಶ್ವಕಪ್ ಟೀಂ ಇಂಡಿಯಾದಲ್ಲಿ ಮಿಸ್ ಆಗಿರುವುದು ಏನು ಗೊತ್ತಾ?!

ಮುಂಬೈ: 2019 ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ತಂಡದ ಬಗ್ಗೆ ಹಲವು ಚರ್ಚೆಗಳು ...