ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಆರಂಭದ ದಿನಗಳಲ್ಲಿ ಬಡತನದಿಂದಲೇ ಮೇಲೆ ಬಂದವರು. ಹಿಂದೊಮ್ಮೆ ತಾವು ಎದುರಿಸಿದ ಪಾಡನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ಬಳಿ ಒಂದು ಸಮಯದಲ್ಲಿ ಕಾರು ಖರೀದಿಸಿದ್ದಕ್ಕೆ ಇಎಂಐ ಪಾವತಿಸಲು ಹಣವಿರಲಿಲ್ಲ. ಆದರೆ ಆ ಕಾರನ್ನು ಅವರು ಮರಳಿ ತೆಗೆದುಕೊಂಡು ಹೋಗಬಾರದೆಂದು ಎರಡು ವರ್ಷ ಯಾರ ಕಣ್ಣಿಗೂ ಬೀಳದಂತೆ ಅಡಗಿಸಿಟ್ಟಿದ್ದೆವು ಎಂದು ಪಾಂಡ್ಯ ಹೇಳಿದ್ದಾರೆ.ಈ ಸಂದರ್ಶನದಲ್ಲಿ ಅವರು ತಾನು ಮತ್ತು ಸಹೋದರ