ಕೇಪ್ ಟೌನ್: ಹಾರ್ದಿಕ್ ಪಾಂಡ್ಯ ಈ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿ. ಕಳೆದ ಬಾರಿ ಮುಳುಗುತ್ತಿರುವ ಟೀಂ ಇಂಡಿಯಾಗೆ ಅವರು ಆಸರೆಯಾಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ. ಇದೀಗ ಮತ್ತೊಮ್ಮೆ ಅದೇ ಕೆಲಸ ದ.ಆಫ್ರಿಕಾ ವಿರುದ್ಧ ಮಾಡಿದ್ದಾರೆ. ಬಹುಶಃ ಪಾಂಡ್ಯ ಹೊಡೆದ ಆ 93 ರನ್ ಗಳಿಲ್ಲದೇ ಹೋಗಿದ್ದರೆ ಟೀಂ ಇಂಡಿಯಾ ಸ್ಥಿತಿ ಹೀನಾಯವಾಗಿರುತ್ತಿತ್ತು. ಒತ್ತಡದ ಸನ್ನಿವೇಶದಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟುವ ಚೇತೇಶ್ವರ ಪೂಜಾರ ಇಂದೂ ಕೂಡಾ