Widgets Magazine

ನಟಿ ಜತೆಗೆ ಹಾರ್ದಿಕ್ ಪಾಂಡ್ಯ ಫೋಟೋ : ಟ್ರೋಲ್ ಆದ ಕ್ರಿಕೆಟಿಗ

ಮುಂಬೈ| Krishnaveni K| Last Modified ಮಂಗಳವಾರ, 7 ಮೇ 2019 (07:17 IST)
ಮುಂಬೈ: ಕ್ರಿಕೆಟಿಗ ಕಾಫಿ ವಿತ್ ಕರಣ್ ಶೋನ ಅವಾಂತರದ ಬಗ್ಗೆ ಪಾಂಡ್ಯ ಮರೆತರೂ ಜನ ಮರೆಯುವಂತೆ ಕಾಣುತ್ತಿಲ್ಲ.

 
ಇದೀಗ ಕಿರುತೆರೆ ನಟಿ ಕ್ರಿಸ್ಟಲ್ ಡಿಸೋಜಾ ಪಬ್ ಒಂದರಲ್ಲಿ ಫೋಟೋ ತೆಗೆಸಿಕೊಂಡು ನನ್ನ ಅಣ್ಣನಂತಿರುವ ಒಳ್ಳೆ ಅಣ್ಣ ಯಾರೂ ಇಲ್ಲ ಎಂದು ಅಡಿಬರಹ ಬರೆದು ಪ್ರಕಟಿಸಿದ್ದಾರೆ.
 
ಕ್ರಿಸ್ಟಲ್ ಹೀಗೆ ಬರೆದುಕೊಂಡಿದ್ದು ನೋಡಿ ‘ನಾನಾಗಿದ್ದರೆ ಇಂತಹ ಅಣ್ಣನ ಜತೆ ಫೋಟೋ ತೆಗೆಸಿಕೊಳ್ಳಲು ಭಯಪಡುತ್ತಿದ್ದೆ’ ಎಂದು ನಟಿಗೆ ಟ್ರೋಲ್ ಮಾಡಿದ್ದಾರೆ. ಇದೀಗ ಟ್ರೋಲಿಗರ ಕಾಟ ತಡೆಯಲಾಗದೇ ನಟಿ ಕ್ರಿಸ್ಟಲ್ ಪ್ರತಿಕ್ರಿಯೆ ನೀಡಿದ್ದು, ಜನ ಇಷ್ಟು ಕೀಳಾಗಿ ಯೋಚನೆ ಮಾಡ್ತಾರೆ ಎಂದು ಇದರಲ್ಲೇ ಗೊತ್ತಾಗುತ್ತೆ. ಇಂತಹವರಿಗೆ ಉದಾಸೀನವೇ ಮದ್ದು ಎಂದು ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :