ಮೊಹಮ್ಮದ್ ಶಮಿ ಮೇಲೆ ಮತ್ತೆ ಪತ್ನಿ ಹಸೀನ್ ಜಹಾನ್ ಕಿಡಿ

ಕೋಲ್ಕೊತ್ತಾ| Krishnaveni K| Last Modified ಬುಧವಾರ, 4 ಸೆಪ್ಟಂಬರ್ 2019 (09:06 IST)
ಕೋಲ್ಕೊತ್ತಾ: ಗೃಹಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಕೋರ್ಟ್ ನಿಂದ ಬಂಧನ ವಾರೆಂಟ್ ಪಡೆದಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಮತ್ತೆ ಪತ್ನಿ ಹಸೀನ್ ಜಹಾನ್ ಕೆಂಡ ಕಾರಿದ್ದಾರೆ.

 
ವರ್ಷಗಳ ಹಿಂದೆಯೇ ಶಮಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದುವರೆಗೆ ವಿಚಾರಣೆ ಹಂತದಲ್ಲೇ ಇತ್ತು. ಆದರೆ ಖುದ್ದಾಗಿ ವಿಚಾರಣೆಗೆ ಹಾಜರಾಗದೇ ಇದ್ದಿದ್ದಕ್ಕೆ ಶಮಿಗೆ ಕೋರ್ಟ್ ಮುಂದೆ ಹಾಜರಾಗಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು ತಪ್ಪಿದಲ್ಲಿ ಬಂಧನದ ಎಚ್ಚರಿಕೆ ನೀಡಲಾಗಿದೆ.
 
ಕೋರ್ಟು ತೀರ್ಪಿನ ಬಳಿಕ ಪ್ರತಿಕ್ರಿಯಿಸಿರುವ ಹಸೀನ್ ಜಹಾನ್ ‘ಇಂದು ನನಗೆ ನ್ಯಾಯಾಂಗದ ಮೇಲೆ ಭರವಸೆ ಮೂಡಿದೆ. ವರ್ಷದಿಂದ ನನ್ನ ಹೋರಾಟ ಮಾಡುತ್ತಿದ್ದೇನೆ. ನಿಮಗೆಲ್ಲಾ ಗೊತ್ತು, ಶಮಿ ತಾನು ದೊಡ್ಡ ಕ್ರಿಕೆಟಿಗ, ತಾವೊಬ್ಬ ಪ್ರಭಾವಿ ವ್ಯಕ್ತಿ ಎಂದುಕೊಂಡಿದ್ದಾರೆ’ ಎಂದಿದ್ದಾರೆ. ಅಲ್ಲದೆ, ಸ್ಥಳೀಯ ಪೊಲೀಸರು ತನಗೂ, ತನ್ನ ಪುಟ್ಟ ಮಗಳಿಗೂ ಕಿರುಕುಳ ನೀಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸಿಎಂ ಆಗಿರದೇ ಇಲ್ಲದಿದ್ದರೆ ತಾನು ಇಷ್ಟು ದಿನ ಜೀವಂತವಾಗಿರುತ್ತಿರಲಿಲ್ಲ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :