ಅಂತೂ ಮಧುಚಂದ್ರ ಮುಗಿಸಿ ಭಾರತಕ್ಕೆ ಮರಳಿದ್ರಪ್ಪಾ ವಿರುಷ್ಕಾ ಜೋಡಿ!
ದೆಹಲಿ|
pavithra|
Last Modified ಬುಧವಾರ, 20 ಡಿಸೆಂಬರ್ 2017 (14:52 IST)
ದೆಹಲಿ: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್-ಅನುಷ್ಕಾ ಜೋಡಿ
ಡಿಸೆಂಬರ್ 11 ರಂದು ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡ ಈ ಜೋಡಿ ಹನಿಮೂನ್ ಗಾಗಿ ವಿದೇಶ ಪ್ರಯಾಣ ಮಾಡಿ ಈಗ ಮರಳಿ ದೆಹಲಿಗೆ ಬಂದು ತಲುಪಿದ್ದಾರೆ. ಸದ್ಯಕ್ಕೆ ಇವರು ಕುಟುಂಬದವರ ಜೊತೆ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.
ಇವರು ತೊಟ್ಟ ಸಾಂಪ್ರದಾಯಕ ಉಡುಗೆಯ ಪೋಟೋ
ಎಲ್ಲರ ಗಮನ ಸೆಳೆದಿದ್ದು ಈಗ ಈ ಪೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇವರು ಗುರುವಾರ ರಾಜಧಾನಿ ದೆಹಲಿಯಲ್ಲಿ ತಮ್ಮ ಬಂಧುಮಿತ್ರರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ. ನಂತರ ಇವರು ಡಿ.26 ರಂದು ಮುಂಬೈನಲ್ಲಿ ಇನ್ನೊಂದು ಔತಣಕೂಟ ಏರ್ಪಡಿಸಿದ್ದು,ಇದರಲ್ಲಿ ಸಿನೆಮಾ, ಕ್ರೀಡೆ ಹಾಗು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖರು ಹಾಜರಾಗಲಿದ್ದಾರೆ.