ಮೈದಾನದಲ್ಲಿ ಸಿಟ್ಟು ಪ್ರದರ್ಶಿಸಿದ್ದ ಧೋನಿ ಪಂದ್ಯ ಮುಗಿದ ಬಳಿಕ ಯುವ ಬೌಲರ್ ಗೆ ಮಾಡಿದ್ದೇನು ಗೊತ್ತಾ?!

ಚೆನ್ನೈ, ಮಂಗಳವಾರ, 9 ಏಪ್ರಿಲ್ 2019 (09:35 IST)

ಚೆನ್ನೈ: ಧೋನಿ ಮೈದಾನದಲ್ಲಿ ಸಿಟ್ಟು ಮಾಡಿಕೊಳ್ಳುವುದು ಕಡಿಮೆ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಯುವ ಬೌಲರ್ ದೀಪಕ್ ಚಹರ್ ಸತತವಾಗಿ ನೋ ಬಾಲ್ ಎಸೆದಿದ್ದಕ್ಕೆ ಕೂಗಾಡಿದ ವಿಚಾರ ನಿಮಗೆಲ್ಲಾ ಗೊತ್ತೇ ಇದೆ.


 
ಆದರೆ ಈ ಘಟನೆ ಬಗ್ಗೆ ಇದೀಗ ಬೌಲರ್ ದೀಪಕ್ ಚಹರ್ ಮಾತನಾಡಿದ್ದು, ಧೋನಿಯ ಇನ್ನೊಂದು ಮುಖ ಅನಾವರಣಗೊಳಿಸಿದ್ದಾರೆ. ಇದು ಪ್ರತಿಯೊಬ್ಬ ನಾಯಕನೂ ತಿಳಿದುಕೊಳ್ಳಲೇಬೇಕಾದ ಪಾಠ.
 
ನೋ ಬಾಲ್ ಎಸೆದಾಗ ಧೋನಿ ಬಾಯ್ ನನ್ನ ಮೇಲೆ ವಿಪರೀತ ಸಿಟ್ಟುಗೊಂಡಿದ್ದರು. ಅವರು ನನ್ನ ಮೇಲೆ ವಿಪರೀತ ಸಿಟ್ಟಾಗಿದ್ದರು. ನಾನು ದೊಡ್ಡ ತಪ್ಪು ಮಾಡಿದ್ದೆ. ನನಗೆ ಅವರು ಹಲವು ವಿಚಾರ ಕೂಗಾಡುತ್ತಲೇ ಹೇಳಿದರು. ಆದರೆ ನನಗೆ ಒಂದೇ ಒಂದು ವಿಚಾರ ತಲೆಯಲ್ಲಿ ಓಡಾಡುತ್ತಿತ್ತು. ಮುಂದೆ ನಾನು ಹೇಗೆ ಬಾಲ್ ಮಾಡಬೇಕೆಂದು. ಆದರೆ ಪಂದ್ಯ ಮುಗಿದ ಬಳಿಕ ಎಲ್ಲರೂ ನನ್ನ ಬಳಿಗೆ ಬಂದು ಚೆನ್ನಾಗಿ ಬಾಲ್ ಮಾಡಿದೆ ಎಂದು ಅಭಿನಂದಿಸಿದರು. ಧೋನಿ ನನ್ನ ಬಳಿ ಬಂದು ನನ್ನನ್ನು ಅಪ್ಪಿಕೊಂಡು, ‘ವೆಲ್ ಡನ್’ ಎಂದರು.ಅಲ್ಲದೆ, ಮುಂದೆ ಎಲ್ಲಾ ಪಂದ್ಯಗಳಲ್ಲಿ ಚೆನ್ನಾಗಿ ಆಡು ಎಂದು ಬೆನ್ನುತಟ್ಟಿದರು’ ಎಂದು ದೀಪಕ್ ಹೇಳಿಕೊಂಡಿದ್ದಾರೆ. ಈ ಮೂಲಕ ಒಬ್ಬ ನಾಯಕನಾಗಿ ಧೋನಿ ಹೇಗೆ ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದರೆ ಆರ್ ಸಿಬಿ ಗೆಲ್ಲುತ್ತೆ!

ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ...

news

ವಿಶ್ವಕಪ್ ಕ್ರಿಕೆಟ್ ಗೆ ಟೀಂ ಇಂಡಿಯಾ ಪ್ರಕಟವಾಗುವ ಡೇಟ್ ಫಿಕ್ಸ್

ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಗೆ ಟೀಂ ಇಂಡಿಯಾ ಪ್ರಕಟವಾಗುವ ದಿನಾಂಕ ಬಿಸಿಸಿಐ ನಿಗದಿ ಮಾಡಿದೆ. ...

news

ಐಪಿಎಲ್: ಧೋನಿ ಮೇಲಿರುವ ಸ್ಥಳೀಯರ ಅಭಿಮಾನಿ ವಿರಾಟ್ ಕೊಹ್ಲಿ ಆರ್ ಸಿಬಿ ಮೇಲಿಲ್ಲ ಯಾಕೆ ಗೊತ್ತಾ?!

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಇಷ್ಟು ವರ್ಷ ಐಪಿಎಲ್ ಆಡಿದ ಬಳಿಕ ಧೋನಿ ತಮಿಳುನಾಡಿನ ಮನೆ ...

news

ಐಪಿಎಲ್: ಯಾರಿಗೇಳಾಣ ನಮ್ಮ ಪ್ರಾಬ್ಲಂ?! ಸತತ ಸೋಲಿನ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಬೆಂಗಳೂರು: ಆರ್ ಸಿಬಿ ತಂಡ ಪ್ರತಿ ನಿತ್ಯ ಸೋಲುವುದು, ಅದಕ್ಕೆ ನೆಪ ಹುಡುಕುತ್ತಾ ಕೂರುವುದು ನಾಯಕ ವಿರಾಟ್ ...