ಮುಂಬೈ: ಟೀಂ ಇಂಡಿಯಾದಲ್ಲಿ ಇಂದು ಗ್ರಾಮೀಣ ಭಾಗದಿಂದ ಪ್ರತಿಭೆಗಳೂ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ ಕಪಿಲ್ ದೇವ್ ಎಂದು ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಇಂದು ಕೇವಲ ಸುಸಜ್ಜಿತ ನಗರಗಳಿಂದ ಬಂದ ಕ್ರಿಕೆಟಿಗರಿಗಿಂತ ಗ್ರಾಮೀಣ ಭಾಗದ ಆಟಗಾರರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಇಂತಹ ಟ್ರೆಂಟ್ ಸೃಷ್ಟಿಸಿದ್ದು ಕಪಿಲ್ ದೇವ್.ಅವರು ಹರಿಯಾಣದ ಸಣ್ಣ ಗ್ರಾಮದಿಂದ ಬಂದು ದೊಡ್ಡ ಸಾಧನೆ ಮಾಡಿದರು. ಇದು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸ್ಪೂರ್ತಿಯಾಯಿತು. ತಾನು