‘ಕಂಜೂಸ್’ ಎಂದ ಯುವರಾಜ್ ಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರವೇನು?

ಮುಂಬೈ| Krishnaveni| Last Modified ಭಾನುವಾರ, 12 ನವೆಂಬರ್ 2017 (08:15 IST)
ಮುಂಬೈ: ಕೋಟ್ಯಂತರ ರೂಪಾಯಿ ಸಂಪಾದಿಸುವ, ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದು ಹೆಸರು ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಕಂಜೂಸ್’ ಅಂತೆ. ಹಾಗಂತ ತಂಡದ ಸಹವರ್ತಿ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.
 
ಸಂದರ್ಶನವೊಂದರಲ್ಲಿ ಯುವರಾಜ್ ಬಳಿ ತಂಡದಲ್ಲಿ ಅತೀ ದೊಡ್ಡ ಕಂಜೂಸ್ ಯಾರು ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ್ದ ಯುವರಾಜ್ ವಿರಾಟ್ ಕೊಹ್ಲಿ ಎಂದಿದ್ದಾರೆ. ಎಲ್ಲೇ ಹೋಟೆಲ್ ಗೆ ಹೋದರೂ ವಿರಾಟ್ ಬಿಲ್ ಪಾವತಿಸಬೇಕೆಂದರೆ ಅವರನ್ನು ಕಂಜೂಸ್ ಎಂದು ಕರೆಯಬೇಕು.
 
ಆಗ ಸ್ವತಃ ಕೊಹ್ಲಿ ಬಿಲ್ ಪಾವತಿಸಲು ಮುಂದೆ ಬರುತ್ತಾರೆ ಎಂದು ಯುವರಾಜ್ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ ‘ಯುವಿ ಹೇಗೆಂದರೆ ತನ್ನನ್ನು ಯಾರಾದರೂ ಕರೆದಾರೆಂದು ತಾನೇ ಇನ್ನೊಬ್ಬರನ್ನು ಹಾಗೆ ಕರೆಯುತ್ತಾರೆ. ಇದರಿಂದ ತಾವು ಎಸ್ಕೇಪ್ ಆಗಬಹುದು ಎಂಬುದು ಯುವಿ ಲೆಕ್ಕಾಚಾರ’ ಎಂದು ಕಾಲೆಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :