ಬೇ ಓವಲ್: ಅಂಡರ್ 19 ವಿಶ್ವಕಪ್ ಫೈನಲ್ ಗೇರಿರುವ ತನ್ನ ಹುಡುಗರಿಗೆ ಕೋಚ್ ರಾಹುಲ್ ದ್ರಾವಿಡ್ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರಂತೆ. ಅದನ್ನು ಹುಡುಗರೂ ಚಾಚೂ ತಪ್ಪದೆ ಪಾಲಿಸಿದ್ದಾರೆ! ಅದೇನದು ಅಂತೀರಾ? ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದೇ ಕಾಲ ಕಳೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹದ್ದಾರಲ್ಲಿ ದ್ರಾವಿಡ್ ತಮ್ಮ ಹುಡುಗರಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ. ಫೈನಲ್ ತನಕ ಸ್ವಿಚ್ ಆಫ್ ಮಾಡಿ ಎಂದಿದ್ದರಂತೆ! ಅದರಂತೆ ಮನೆಯವರ ಜತೆ ಮಾತೂ ಆಡದೇ