ಮುಂಬೈ: 2017 ರಲ್ಲಿ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದ ಮೇಲೆ ರವಿಶಾಸ್ತ್ರಿ ಕೋಚ್ ಆಗಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಜತೆಗೆ ಶಾಸ್ತ್ರಿ ಕಾಂಬಿನೇಷನ್ ಚೆನ್ನಾಗಿಯೇ ವರ್ಕ್ ಆಗಿದೆ.ಈ ಬಗ್ಗೆ ಹಿರಿಯ ವೇಗಿ ಆಶಿಷ್ ನೆಹ್ರಾ ಮಾತನಾಡಿದ್ದಾರೆ. ಇಬ್ಬರೂ ಅಷ್ಟು ಚೆನ್ನಾಗಿ ಹೊಂದಿಕೊಂಡಿರುವುದು ಹೇಗೆ ಎಂಬುದನ್ನು ನೆಹ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ರವಿಶಾಸ್ತ್ರಿ ವಿರಾಟ್ ಕೊಹ್ಲಿ ನಿರ್ಧಾರಗಳಲ್ಲಿ ಮೂಗು ತೂರಿಸಲು ಹೋಗುವುದಿಲ್ಲ. ಶಾಸ್ತ್ರಿ ಒಬ್ಬ ಅತ್ಯುತ್ತಮ ಪ್ರೇರಕ.