ಸೆಂಚೂರಿಯನ್: ಟೀಂ ಇಂಡಿಯಾವನ್ನು ಕೆಡವಲು ದ.ಆಫ್ರಿಕಾ ಮತ್ತೊಂದು ಬೌನ್ಸಿ ಖೆಡ್ಡಾ ರೆಡಿ ಮಾಡಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಸೆಂಚೂರಿಯನ್ ಮೈದಾನದ ಪಿಚ್ ಅಚ್ಚರಿಗೆ ನೂಕಿದೆ. ಮೊದಲ ದಿನವೇ ಭಾರತದ ಸ್ಪಿನ್ನರ್ 3 ವಿಕೆಟ್ ಕಿತ್ತರೆ, ವೇಗಿಗಳು ವಿಕೆಟ್ ಪಡೆಯಲು ಪರದಾಡಿದರು. ಎಲ್ಲರೂ ನಿರೀಕ್ಷಿಸಿದ ಬೌನ್ಸ್ ಕಾಣಿಸಲೇ ಇಲ್ಲ. ಹಸಿರು ಪಿಚ್ ನಿರೀಕ್ಷಿಸಿದ್ದವರಿಗೆ ಇಲ್ಲಿನ ಡ್ರೈ ಪಿಚ್ ನೋಡಿ ಅಚ್ಚರಿಯಾಗಿದೆ. ಇದರಿಂದಾಗಿ ಬ್ಯಾಟ್ಸ್ ಮನ್ ಗಳೂ