ವೇಗಿಗಳ ಸ್ವರ್ಗದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಶಸ್ವಿಯಾಗಿದ್ದರ ಸೀಕ್ರೆಟ್ ಔಟ್!

ಸೆಂಚೂರಿಯನ್| Krishnaveni| Last Modified ಸೋಮವಾರ, 15 ಜನವರಿ 2018 (09:52 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಕಿತ್ತಿದ್ದರು.

ವೇಗಿಗಳ ಸ್ವರ್ಗವೆನಿಸಿದ ಪಿಚ್ ನಲ್ಲಿ ವೇಗದ ಬೌಲರ್ ಗಳಿಗಿಂತಲೂ ಅಶ್ವಿನ್ ಸ್ಪಿನ್ ಹೆಚ್ಚು ಜಾದೂ ಮಾಡಿತ್ತು. ಇದು ಹೇಗೆ ಸಾಧ್ಯ ಎಂದು ಎಲ್ಲರೂ ಅಚ್ಚರಿಪಡುತ್ತಿರಬೇಕಾದರೆ ಸ್ವತಃ ಅಶ್ವಿನ್ ತಮ್ಮ ಯಶಸ್ಸಿನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.ಎರಡು ತಿಂಗಳುಗಳ ಮೊದಲು ಅಶ್ವಿನ್ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಿ ಬಂದಿದ್ದರು. ಅಲ್ಲಿನ ವೇಗದ ಪಿಚ್ ಗಳಲ್ಲಿ ಸ್ಪಿನ್ನರ್ ಅಶ್ವಿನ್ ಆಡಿ ಅನುಭವ ಗಳಿಸಿದ್ದೇ ಇಲ್ಲಿ ಸಹಾಯಕ್ಕೆ ಬಂತು ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿ ಬೇರೆಲ್ಲರೂ ಪರದಾಡುತ್ತಿರಬೇಕಾದರೆ ಅಶ್ವಿನ್ ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :