ಕೇಪ್ ಟೌನ್: ವಿರಾಟ್ ಕೊಹ್ಲಿ ಒಮ್ಮೆ ಸೆಟ್ ಆದರೆ ಎಂತಹಾ ಪ್ರಳಯಾಂತಕ ಬ್ಯಾಟ್ಸ್ ಮನ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಟೀಂ ಇಂಡಿಯಾ ವಿರುದ್ಧ ಗೆಲ್ಲಬೇಕಾದರೆ ಈ ಪ್ರಳಯಾಂತಕನನ್ನು ಸುಮ್ಮನಿರಿಸಬೇಕೆಂದು ದ.ಆಫ್ರಿಕಾ ಚೆನ್ನಾಗಿ ಯೋಜನೆ ರೂಪಿಸಿತ್ತು. ಅದರ ಪರಿಣಾಮವೇ ಮೊದಲ ಟೆಸ್ಟ್ ನ ಎರಡೂ ಇನಿಂಗ್ಸ್ ನಲ್ಲಿ ಕೊಹ್ಲಿ ಬಾಲ ಬಿಚ್ಚಲು ಸಾಧ್ಯವಾಗಲಿಲ್ಲ. ಸಣ್ಣ ಮೊತ್ತಕ್ಕೇ ಪೆವಿಲಿಯನ್ ಸೇರಿಕೊಂಡರು. ಇದರ ಹಿಂದೆ ನಮ್ಮ ಪಕ್ಕಾ ಯೋಜನೆ ಕೆಲಸ ಮಾಡಿತ್ತು