ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ, ಹಠವಾದಿಯಂತೆ ಕಾಣುತ್ತಾರೆ. ಆದರೆ ಮೈದಾನದಿಂದ ಹೊರಗೆ ಅವರು ಅಷ್ಟೇ ಸ್ನೇಹಜೀವಿ, ಸರಳ ಮನುಷ್ಯ ಎಂದು ಮಾಜಿ ಆಯ್ಕೆಗಾರ ಸರಣ್ ದೀಪ್ ಹೇಳಿದ್ದಾರೆ.ಅದರಲ್ಲೂ ಕೊಹ್ಲಿ ಮನೆಯಲ್ಲಿ ಹೇಗಿರ್ತಾರೆ? ಅತಿಥಿಗಳನ್ನು ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಸ್ವಾಗತಿಸುವ ಪರಿಯನ್ನು ಸರಣ್ ದೀಪ್ ಹೇಳಿಕೊಂಡಿದ್ದಾರೆ. ‘ಅವರ ಮನೆಯಲ್ಲಿ ನೌಕರರಿಲ್ಲ. ಅವರೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಾರೆ, ಅತಿಥಿಗಳಿಗೆ ಕೊಹ್ಲಿ-ಅನುಷ್ಕಾ ಖುದ್ದಾಗಿ ಆಹಾರ, ಪಾನೀಯ ಸರ್ವ್