ಮುಂಬೈ: ಏನೇ ಆಗಲಿ, ಎಂತಹದ್ದೇ ಪರಿಸ್ಥಿತಿಯಿರಲಿ, ನನ್ನ ಬೆಂಬಲ ಟೀಂ ಇಂಡಿಯಾಗೆ ಇರುತ್ತದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೂ ಮೊದಲು ಟೀಂ ಇಂಡಿಯಾಗೆ ಸಂದೇಶ ನೀಡಿರುವ ಅವರು ಮಹಿಳೆಯರಿರಲಿ, ಪುರುಷರ ಕ್ರಿಕೆಟ್ ಇರಲಿ, ನನ್ನ ಬೆಂಬಲ ನೀಲಿ ಸಮವಸ್ತ್ರಧಾರಿಗಳಿಗೆ ಇದ್ದೇ ಇರುತ್ತದೆ ಎಂದಿದ್ದಾರೆ.ಲಂಕಾ ದುರ್ಬಲ ತಂಡವಾಗಿದ್ದರೂ ಸರಿಯೇ. ಅಥವಾ ನಮ್ಮ ತಂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲವಾದರೂ ಸರಿಯೇ