Widgets Magazine

ಐಸಿಸಿ ಟೆಸ್ಟ್ ಶ್ರೇಯಾಂಕ: ಕೊಹ್ಲಿಗೆ ಎರಡನೇ ಸ್ಥಾನವೇ ಗತಿ

ದುಬೈ| Krishnaveni K| Last Modified ಮಂಗಳವಾರ, 17 ಸೆಪ್ಟಂಬರ್ 2019 (09:22 IST)
ದುಬೈ: ಐಸಿಸಿ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

 
ಕಳೆದ ವಾರವಷ್ಟೇ ಕೊಹ್ಲಿಯನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ನಂ.1 ಸ್ಥಾನಕ್ಕೇರಿದ್ದರು. ಸ್ಮಿತ್ 937 ಅಂಕ ಸಂಪಾದಿಸಿದ್ದರೆ ಕೊಹ್ಲಿ 903 ಅಂಕ ಹೊಂದಿದ್ದಾರೆ.
 
ಇನ್ನು ಬೌಲರ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕ್ಯುಮಿನ್ಸ್ ನಂ.1 ಸ್ಥಾನದಲ್ಲಿದ್ದರೆ ದ.ಆಫ್ರಿಕಾದ ಕಗಿಸೊ ರಬಾಡಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :