ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಕೊನೆಗೂ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಆದರೆ ಮೊದಲ ಬಾಲ್ ಗೇ ಔಟ್ ಆಗಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆ ಬರೆದಿದ್ದಾರೆ. ಇನಿಂಗ್ಸ್ ಆರಂಭಿಸಲು ಶಿಖರ್ ಧವನ್ ಜತೆಗೆ ಬಂದ ರಾಹುಲ್ ಲಕ್ಮಲ್ ಎಸೆದ ಪಂದ್ಯದ ಮೊದಲ ಎಸೆತಕ್ಕೇ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಈ ರೀತಿ ಔಟಾದ ಭಾರತದ ಗವಾಸ್ಕರ್, ಸುಧೀರ್ ನಾಯಕ್,