ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ ಕ್ರಿಕೆಟಿಗರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗುವುದು ಹೊಸತೇನಲ್ಲ. ಇದೀಗ ಮತ್ತೊಮ್ಮೆ ಮೊಹಮ್ಮದ್ ಕೈಫ್ ಸಂಪ್ರದಾಯವಾದಿಗಳ ಕಿಡಿಗೆ ಪಾತ್ರರಾಗಿದ್ದಾರೆ. ಅದಕ್ಕೆ ಕಾರಣ ಕೈಫ್ ತಮ್ಮ ಪತ್ನಿ, ಮಕ್ಕಳ ಜತೆಗೆ ಕ್ರಿಸ್ ಮಸ್ ಹಬ್ಬ ಆಚರಿಸಿ ಆ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವುದು. ಇದು ಇಸ್ಲಾಂ ಧರ್ಮದಲ್ಲಿ ನ್ಯಾಯ ಸಮ್ಮತವಲ್ಲ ಎನ್ನುವುದು ಸಂಪ್ರದಾಯವಾದಿಗಳ ವಾದ.ಇದರ ವಿರುದ್ಧ ಕಿಡಿಕಾರಿರುವ ಸಂಪ್ರದಾಯವಾದಿಗಳು, ಇಂತಹ ಇಸ್ಲಾಂ ವಿರೋಧಿ ಕೆಲಸ