ಕೋಲ್ಕೊತ್ತಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ಆಟಗಾರರ ಕಂಗೆಡಿಸಿದ್ದು ಬಿಸಿಲು. ಉಭಯ ತಂಡದ ಆಟಗಾರರು ಮೈದಾನದಲ್ಲಿ ಬೆವರಿಳಿಸಿ ಸುಸ್ತಾಗಿ ಹೋಗಿದ್ದರು. ಆಟಗಾರರು ಆಗಾಗ ನೀರು ಕುಡಿದು, ಐಸ್ ಪ್ಯಾಕ್ ಮೈಮೇಲೆ ಹಾಕಿಕೊಂಡು, ಮುಖಕ್ಕೆ ಬಾಟಲಿ ನೀರು ಸುರುವಿಕೊಂಡು ಹೇಗೋ ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದುದು ಕಂಡುಬಂತು.ಭಾರತೀಯ ಆಟಗಾರರೂ ಇದಕ್ಕೆ ಹೊರತಾಗಿರಲಿಲ್ಲ. ಫಿಟ್ ಆಂಡ್ ಫೈನ್ ವಿರಾಟ್ ಕೊಹ್ಲಿ ಕೂಡಾ ಐಸ್ ಪ್ಯಾಕ್