ಬರೋಡಾ: ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಸ್ಥಿರ ಸದಸ್ಯನಾಗಿದ್ದ ಇರ್ಫಾನ್ ಪಠಾಣ್ ರನ್ನು ತವರು ಬರೋಡಾ ರಣಜಿ ತಂಡದಿಂದ ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಕ್ಕೆ ಅವರು ಸಿಟ್ಟಿಗೆದ್ದಿದ್ದಾರೆ. ಈ ಸಾಲಿನ ರಣಜಿ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಗೆ ಇರ್ಫಾನ್ ಬರೋಡಾ ತಂಡದ ನಾಯಕರಾಗಿದ್ದರು. ಮೊದಲನೇ ಪಂದ್ಯದಲ್ಲಿ 80 ರನ್ ಸಿಡಿಸಿದ್ದಲ್ಲದೆ, ಎರಡು ಪಂದ್ಯಗಳಿಂದ ಎರಡು ವಿಕೆಟ್ ಕಿತ್ತಿದ್ದರು.ಆದರೆ ಅಂಕಪಟ್ಟಿಯಲ್ಲಿ ತೀರಾ ಹಿಂದಿರುವ ಬರೋಡಾ ತಂಡದ ನಾಯಕನ ಸ್ಥಾನದಿಂದ ಮೂರನೇ ಪಂದ್ಯಕ್ಕಾಗುವಾಗ ಪಠಾಣ್