ಸೆಂಚೂರಿಯನ್: ಟೀಂ ಇಂಡಿಯಾಕ್ಕೆ ಹೊಸ ಹೊಳಪು ತಂದಿತ್ತ ಧೋನಿ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟಿಂಗ್ ಮಾಡುವುದೇ ಕಡಿಮೆ. ಅದಕ್ಕಿಂತ ಹೆಚ್ಚಿಗೆ ಹೇಳಬೇಕೆಂದರೆ ಹೊಸಬರ ದರ್ಬಾರ್ ನಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶವೇ ಸಿಗುತ್ತಿಲ್ಲ. ಇದಕ್ಕೆ ಕಾರಣ ಧೋನಿ ಬ್ಯಾಟಿಂಗ್ ಕ್ರಮಾಂಕವೂ ಒಂದು. ಇದರಿಂದಾಗಿ ಇತ್ತೀಚೆಗೆ ಧೋನಿ ಆಡುವ ಬಳಗದಲ್ಲಿದ್ದರೂ ಕೇವಲ ಕೀಪಿಂಗ್ ಗೆ ಸೀಮಿತರಾಗಿದ್ದಾರೆ. ವಿಕೆಟ್ ಹಿಂದುಗಡೆ ಇದ್ದುಕೊಂಡೇ ಅವರು ಆಟವನ್ನು ನಿಯಂತ್ರಿಸುವುದರಲ್ಲಿ ಈಗಲೂ ನಿಸ್ಸೀಮರು. ಆದರೂ ಧೋನಿ ಬ್ಯಾಟಿಂಗ್ ಇಷ್ಟಪಡುವ