100 ನೇ ಟೆಸ್ಟ್ ಪಂದ್ಯದ ದಾಖಲೆ ಮಾಡಲಿರುವ ‘ಲಂಬೂ’ ಇಶಾಂತ್ ಶರ್ಮಾ

ಅಹಮ್ಮದಾಬಾದ್| Krishnaveni K| Last Modified ಸೋಮವಾರ, 22 ಫೆಬ್ರವರಿ 2021 (09:52 IST)
ಅಹಮ್ಮದಾಬಾದ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಇದೀಗ 100 ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಅವರ ಪಾಲಿಗೆ ನೂರನೇ ಟೆಸ್ಟ್ ಪಂದ್ಯವಾಗಲಿದೆ.

 
ಈ ಮೂಲಕ ಕಪಿಲ್ ದೇವ್ ಬಳಿಕ 100 ಟೆಸ್ಟ್ ಪಂದ್ಯವಾಡಿದ ಏಕೈಕ ಭಾರತೀಯ ವೇಗಿ ಎಂಬ ದಾಖಲೆ ಮಾಡಲಿದ್ದಾರೆ. ಎಲ್ಲಾ ಸರಿ ಹೋಗಿದ್ದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೇ ಅವರು ಈ ದಾಖಲೆ ಮಾಡಬೇಕಾಗಿತ್ತು. ಆದರೆ ಗಾಯದ ಕಾರಣದಿಂದ ಅವರಿಗೆ ಪೂರ್ಣವಾಗಿ ಟೆಸ್ಟ್ ಆಡಲು ಆಗಿರಲಿಲ್ಲ. ಇದೀಗ ಭಾರತೀಯ ನೆಲದಲ್ಲೇ ಅದೂ ಐತಿಹಾಸಿಕ ಮೈದಾನದಲ್ಲಿ ಹಗಲು ರಾತ್ರಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ಮಾಡುತ್ತಿರುವುದು ವಿಶೇಷ. ಒಬ್ಬ ವೇಗಿ ಇಷ್ಟು ಸುದೀರ್ಘ ಸಮಯದವರೆಗೆ ಫಿಟ್ನೆಸ್ ಕಾಯ್ದುಕೊಂಡು 100 ಟೆಸ್ಟ್ ಪಂದ್ಯವಾಡುವುದು ಸಾಮಾನ್ಯ ಸಂಗತಿಯಲ್ಲ. ಹೀಗಾಗಿ ಇಶಾಂತ್ ಪಾಲಿನ ಈ ಸ್ಮರಣೀಯ ಪಂದ್ಯ ಭಾರತೀಯ ಕ್ರಿಕೆಟಿಗರಗೆ ಹೆಮ್ಮೆಯ ವಿಷಯ.
ಇದರಲ್ಲಿ ಇನ್ನಷ್ಟು ಓದಿ :