ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಸಂಭ್ರಮಿಸುತ್ತಿದ್ದರೆ, ವೇಗಿ ಇಶಾಂತ್ ಶರ್ಮಾ ತಮ್ಮ ಬಗ್ಗೆಯೇ ಸಿಟ್ಟಿನಲ್ಲಿದ್ದಾರಂತೆ.ಇದಕ್ಕೆ ಕಾರಣ ಇಶಾಂತ್ ಮೊದಲ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಮೊದಲ ಓವರ್ ನಲ್ಲೇ ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡಿದ್ದರು. ಎಲ್ ಬಿಡಬ್ಲ್ಯು ಆಗಬೇಕಿದ್ದ ಆ ಬಾಲ್ ನೋ ಬಾಲ್ ಆಗಿತ್ತು.ನಾವೆಲ್ಲರೂ ಎಂಜಾಯ್ ಮಾಡುತ್ತಿದ್ದೇವೆ. ಆದರೆ ಇಶಾಂತ್ ಮಾತ್ರ ಇದೇ ವಿಚಾರಕ್ಕೆ ಸಿಟ್ಟಿನಲ್ಲಿದ್ದಾರೆ.