Widgets Magazine

ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್ ಶರ್ಮಾ

ಜಮೈಕಾ| Krishnaveni K| Last Modified ಸೋಮವಾರ, 2 ಸೆಪ್ಟಂಬರ್ 2019 (07:52 IST)
ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕಪಿಲ್ ದೇವ್ ದಾಖಲೆಯೊಂದನ್ನು ಮುರಿದಿದ್ದಾರೆ.

 
ಇಶಾಂತ್ ಶರ್ಮಾ ಏಷ್ಯಾ ಹೊರಗಿನ ದೇಶಗಳಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 156 ನೇ ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
 
ವಿಂಡೀಸ್ ವಿರುದ್ಧ ಮೂರನೇ ದಿನಾಟದಲ್ಲಿ ಇಶಾಂತ್ ಈ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ 200 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಇಶಾಂತ್ ಎರಡನೇ ಸ್ಥಾನ ಗಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :