100 ನೇ ಟೆಸ್ಟ್ ಆಡುತ್ತಿರುವ ಇಶಾಂತ್ ಶರ್ಮಾಗೆ ಪತ್ನಿಯ ಸ್ಪೆಷಲ್ ಮೆಸೇಜ್

ಅಹಮ್ಮದಾಬಾದ್| Krishnaveni K| Last Modified ಗುರುವಾರ, 25 ಫೆಬ್ರವರಿ 2021 (09:59 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಗೌರವ ಪಡೆದಿದ್ದಾರೆ. ಈ ವೇಳೆ ಪತ್ನಿ ಪ್ರತಿಮಾ ಸಿಂಗ್ ಕೂಡಾ ಇದ್ದರು.
 

ಇನ್ನು, ಇಶಾಂತ್ ರಾಷ್ಟ್ರಪತಿಗಳಿಂದ ಗೌರವ ಪದಕ ಪಡೆಯುವಾಗ ನಾಯಕ ವಿರಾಟ್ ಕೊಹ್ಲಿ ಕೂಡಾ ಪಕ್ಕದಲ್ಲೇ ನಿಂತು ಸಾಥ್ ನೀಡಿದರು. ಇದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಇಶಾಂತ್ ಪತ್ನಿ ಪ್ರತಿಮಾ ಸಿಂಗ್ ತಮ್ಮ ಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಸಂದೇಶ. ‘ಎಲ್ಲಾ ಏಳು, ಬೀಳುಗಳು, ಯಶಸ್ಸು, ವೈಫಲ್ಯಗಳು, ದುಃಖ, ಖುಷಿ, ಪಾರ್ಟಿ ಮಾಡುವಾಗ ಪ್ರಾಕ್ಟೀಸ್ ನಲ್ಲಿ ಭಾಗವಹಿಸಿದ್ದು, ಸುದೀರ್ಘ ಪ್ರಯಾಣ.. ನಿನ್ನ ಎಲ್ಲಾ ಏಳುಬೀಳುಗಳನ್ನು ಕಂಡಿರುವೆ. ಅದಕ್ಕೆಲ್ಲಾ ತಕ್ಕ ಪ್ರತಿಫಲ ಸಿಕ್ಕಿದೆ ಮೈ ಲವ್. ನಿನ್ನ ವಿಶೇಷ 100 ನೇ ಟೆಸ್ಟ್ ಗೆ ನನ್ನ ಅಭಿನಂದನೆಗಳು’ ಎಂದು ಬರೆದು ಪತಿಗೆ ವಿಶ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :