ಹೆಣ್ಣು ಮಗುವಿಗೆ ತಂದೆಯಾದ ಉಮೇಶ್ ಯಾದವ್

ಮುಂಬೈ| Krishnaveni K| Last Modified ಶನಿವಾರ, 2 ಜನವರಿ 2021 (09:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಉಮೇಶ್ ಯಾದವ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಸ್ವತಃ ಉಮೇಶ್ ಯಾದವ್ ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 

ದ್ವಿತೀಯ ಟೆಸ್ಟ್ ವೇಳೆ ಗಾಯಗೊಂಡಿದ್ದ ಉಮೇಶ್ ಯಾದವ್ ಭಾರತಕ್ಕೆ ಮರಳಿದ್ದಾರೆ. ಇದೇ ಸಮಯದಲ್ಲೇ ಉಮೇಶ್ ಗೆ ಈ ಸಿಹಿ ಸುದ್ದಿ ಸಿಕ್ಕಿದೆ. ಉಮೇಶ್ ಪತ್ನಿ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಟ್ರೇಲಿಯಾ ಸರಣಿಯ ಉಳಿದ ಪಂದ್ಯಗಳಲ್ಲಿ ಆಡಲಾಗದ ಬೇಸರ ಉಮೇಶ್ ಗಿತ್ತು. ಆದರೆ ಈಗ ಆ ಬೇಸರ ಮರೆಸಿದೆ ಈ ಸಿಹಿ ಸುದ್ದಿ.
ಇದರಲ್ಲಿ ಇನ್ನಷ್ಟು ಓದಿ :