ಕಳಪೆ ಬ್ಯಾಟಿಂಗ್ ಮಾಡಿ ಟೀಕೆಗೊಳಗಾದ ಟೀಂ ಇಂಡಿಯಾ ನೆರವಿಗೆ ಬಂದ ಇಂಗ್ಲೆಂಡ್ ವೇಗಿ

ಲಾರ್ಡ್ಸ್, ಭಾನುವಾರ, 12 ಆಗಸ್ಟ್ 2018 (08:25 IST)

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಆರಂಭವಾದ ಮೊದಲ ದಿನವೇ 107 ರನ್ ಗಳಿಗೆ ಬಾಲ ಮುದುರಿಕೊಂಡ ಟೀಂ ಇಂಡಿಯಾ ನೆರವಿಗೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬಂದಿದ್ದಾರೆ.
 

ಜೇಮ್ಸ್ ಆಂಡರ್ಸನ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 107 ಕ್ಕೆ ಆಲೌಟ್ ಆಗಿತ್ತು. ಆಂಡರ್ಸನ್ 5 ವಿಕೆಟ್ ಕಿತ್ತಿದ್ದರು.
 
ಆದರೆ ಇದಕ್ಕೆ ಟೀಂ ಇಂಡಿಯಾ ಬ್ಯಾಟಿಂಗ್ ನ್ನು ಎಲ್ಲರೂ ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದರೆ, ಆಂಡರ್ಸನ್ ಮಾತ್ರ ಭಾರತೀಯ ಬ್ಯಾಟ್ಸ್ ಮನ್ ಗಳ ಪರವಾಗಿ ಮಾತನಾಡಿದ್ದಾರೆ. ಪಿಚ್ ಮಳೆ ಬಿದ್ದಿದ್ದರಿಂದ ಎಷ್ಟು ವೇಗಿಗಳಿಗೆ ಸಹಕಾರಿ ನೀಡುತ್ತಿತ್ತೆಂದರೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ್ದರೂ ಇದೇ ಗತಿಯಾಗುತ್ತಿತ್ತು ಎಂದಿದ್ದಾರೆ. ಆ ಮೂಲಕ ಇದು ಬ್ಯಾಟ್ಸ್ ಮನ್ ಗಳ ತಪ್ಪಲ್ಲ, ಪಿಚ್ ಹಾಗೇ ಇತ್ತು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲಾರ್ಡ್ಸ್ ಮೈದಾನದಲ್ಲಿ ಸಚಿನ್ ಕೈಲಾಗದ್ದು ವಿರಾಟ್ ಕೊಹ್ಲಿಯಿಂದ ದಾಖಲಾಗುತ್ತಾ?!

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ...

news

ಕೆಎಲ್ ರಾಹುಲ್ ಗೇ ಶಾಕ್ ಕೊಟ್ಟ ಸಚಿನ್ ಪುತ್ರ ಅರ್ಜುನ್

ಲಾರ್ಡ್ಸ್: ದ್ವಿತೀಯ ಟೆಸ್ಟ್ ಪಂದ್ಯ ಆಡಲು ಲಾರ್ಡ್ಸ್ ಗೆ ಬಂದಿಳಿದಿರುವ ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ...

news

ಟೀಂ ಇಂಡಿಯಾ ಜತೆ ಫೋಟೋ ಅನುಷ್ಕಾ ಶರ್ಮಾ ಫೋಟೋ ತೆಗೆಸಿಕೊಂಡರೂ ತಪ್ಪೇನಿಲ್ಲ!

ಮುಂಬೈ: ಭಾರತೀಯ ರಾಯಭಾರಿ ಕಚೇರಿ ಲಂಡನ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಔತಣ ಕೂಟ ಏರ್ಪಡಿಸಿದ್ದಾಗ ...

news

ಟೀಂ ಇಂಡಿಯಾ ಬ್ಯಾಟಿಂಗ್ ಮೂರು ಕಾಸಿಗೆ ಹರಾಜು

ಲಾರ್ಡ್ಸ್: ಈ ಪಂದ್ಯದಲ್ಲಾದರೂ ತನ್ನ ಬ್ಯಾಟಿಂಗ್ ಸುಧಾರಿಸೀತು ಎಂಬ ಲೆಕ್ಕಾಚಾರಗಳನ್ನು ಟೀಂ ಇಂಡಿಯಾ ...