Widgets Magazine

ಐಸಿಸಿ ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ

ಲಂಡನ್| Krishnaveni K| Last Modified ಮಂಗಳವಾರ, 16 ಜುಲೈ 2019 (10:14 IST)
ಲಂಡನ್: ಈ ಬಾರಿ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನೊಳಗೊಂಡ ಐಸಿಸಿ ವಿಶ್ವ ಇಲೆವೆನ್ ತಂಡವನ್ನು ಐಸಿಸಿ ಬಿಡುಗಡೆ ಮಾಡಿದ್ದು ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

 
ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಆಟಗಾರರಾಗಿದ್ದಾರೆ. ಇವರಿಬ್ಬರೂ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ರೋಹಿತ್ ಈ ವಿಶ್ವಕಪ್ ಕೂಟದಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟ್ಸ್ ಮನ್ ಆಗಿದ್ದರೆ, ಬುಮ್ರಾ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಐದನೇ ಸ್ಥಾನದಲ್ಲಿದ್ದಾರೆ.
 
ಇವರ ಹೊರತಾಗಿ ನಾಲ್ವರು ಇಂಗ್ಲೆಂಡ್ ಆಟಗಾರರು ಬಾಂಗ್ಲಾದೇಶದ ಒಬ್ಬ ಆಟಗಾರ, ಆಸ್ಟ್ರೇಲಿಯಾ ಇಬ್ಬರು ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :