ವಿಶ್ವಕಪ್ 2019: ಮೇಡನ್ ಓವರ್ ಗಳ ಮೂಲಕವೇ ದಾಖಲೆ ಮಾಡಿದ ಜಸ್ಪ್ರೀತ್ ಬುಮ್ರಾ

ಲಂಡನ್| Krishnaveni K| Last Modified ಬುಧವಾರ, 10 ಜುಲೈ 2019 (08:51 IST)
ಲಂಡನ್: 2019 ರ ವಿಶ್ವಕಪ್ ಕೂಟದಲ್ಲಿ ಅತೀ ಹೆಚ್ಚು ಮೇಡನ್ ಓವರ್ ಎಸೆದ ದಾಖಲೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪಾಲಾಗಿದೆ.

 
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಆರಂಭದಲ್ಲಿಯೇ ಮೇಡನ್ ಓವರ್ ಎಸೆದು ಈ ವಿಶ್ವಕಪ್ ಕೂಟದಲ್ಲಿ ಒಟ್ಟು 9 ಮೇಡನ್ ಓವರ್ ಎಸೆದ ದಾಖಲೆ ಮಾಡಿದರು. ಇದು ಈ ವಿಶ್ವಕಪ್ ಕೂಟದಲ್ಲಿ ಒಬ್ಬ ಬೌಲರ್ ಎಸೆದ ಗರಿಷ್ಠ ಮೇಡನ್ ಓವರ್ ಆಗಿದೆ.
 
ಇಂಗ್ಲೆಂಡ್ ನ ಜೋಫ್ರಾ ಆರ್ಚರ್ 8 ಮೇಡನ್ ಓವರ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಉಳಿದ ಭಾರತೀಯ ಬೌಲರ್ ಗಳೆಲ್ಲಾ ಸೇರಿದರೂ ಬುಮ್ರಾ ಒಬ್ಬರೇ ಮಾಡಿದಷ್ಟು ಮೇಡನ್ ಓವರ್ ಮಾಡಿಲ್ಲ ಎಂಬುದು ವಿಶೇಷ!
ಇದರಲ್ಲಿ ಇನ್ನಷ್ಟು ಓದಿ :