ದುಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್ ಶೋ ಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೀಗ ಶಾಕ್ ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬುಮ್ರಾಗೆ ಹಿನ್ನಡೆಯಾಗಿದೆ.ನಂ.1 ಸ್ಥಾನದಲ್ಲಿದ್ದ ಬುಮ್ರಾ ಪಟ್ಟ ಕಳೆದುಕೊಂಡಿದ್ದು, 45 ಅಂಕ ಕಳೆದುಕೊಂಡು 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ವಿಕೆಟ್ ಕೀಳಲು ವಿಫಲರಾಗಿದ್ದರು.ಹೀಗಾಗಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ