ಮುಂಬೈ: ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೊಳಗಾಗಿದ್ದಾರೆ. ಹೀಗಾಗಿ ಅವರು ಈ ವರ್ಷವಿಡೀ ಕ್ರಿಕೆಟ್ ಆಡುವಂತೆಯೇ ಇಲ್ಲ! ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಬುಮ್ರಾ ಮುಂಬರುವ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಬಂದ ವರದಿಯ ಪ್ರಕಾರ ಬುಮ್ರಾ ಈ ಸರಣಿಗೆ ಮಾತ್ರವಲ್ಲ, ವರ್ಷವಿಡೀ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ.ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ಇರಲು ನಿರ್ಧರಿಸಿರುವ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಈ ವರ್ಷವಿಡೀ ಬುಮ್ರಾಗೆ