ಮುಂಬೈ: ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯನ್ನರ ಸದ್ದಡಗಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಹಾಕಿದೆ. ಕೆಲಸದೊತ್ತಡದಿಂದಾಗಿ ಬುಮ್ರಾಗೆ ಬಳಲಿಕೆಯಾಗದಂತೆ ಮತ್ತು ಮುಂಬರುವ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಸರಣಿಗೆ ತಯಾರಾಗಲು ವಿಶ್ರಾಂತಿ ನೀಡಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.ಬುಮ್ರಾ ಸ್ಥಾನದಲ್ಲಿ ಯುವ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಮತ್ತು ಸಿದ್ಧಾರ್ಥ್ ಕೌಲ್ ನ್ಯೂಜಿಲೆಂಡ್