ಜಸ್ಪ್ರೀತ್ ಬುಮ್ರಾಗೆ ಇಂದು ಹೊಸ ದಾಖಲೆ ಮಾಡುವ ಅವಕಾಶ

ಪುಣೆ| Krishnaveni K| Last Modified ಶುಕ್ರವಾರ, 10 ಜನವರಿ 2020 (09:04 IST)
ಪುಣೆ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ ದಾಖಲೆ ಮಾಡುವ ಅವಕಾಶ ಪಡೆದಿದ್ದಾರೆ.

 
ವೇಗಿ ಬುಮ್ರಾ ಇಂದು ಒಂದು ವಿಕೆಟ್ ಪಡೆದರೂ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಖಲೆ ಮುರಿಯಲಿದ್ದಾರೆ. ಅಶ್ವಿನ್ 51 ವಿಕೆಟ್ ಕಬಳಿಸಿದ್ದರು.
 
ಇದೀಗ ಬುಮ್ರಾ, ಯಜುವೇಂದ್ರ ಚಾಹಲ್ ಕೂಡಾ ಇಷ್ಟೇ ವಿಕೆಟ್ ಪಡೆದು ಸಮಬಲ ಸಾಧಿಸಿದ್ದಾರೆ. ಆದರೆ ಚಾಹಲ್ ಗೆ ಇಂದು ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಬುಮ್ರಾಗೆ ಈ ದಾಖಲೆ ಮೊದಲು ಮಾಡುವ ಅವಕಾಶ ಸಿಕ್ಕಿದೆ.
ಇದರಲ್ಲಿ ಇನ್ನಷ್ಟು ಓದಿ :