ನಡೆದಾಡಲೂ ಆಗದ ಸ್ಥಿತಿಯಲ್ಲಿರುವ ಜಸ್ಪ್ರೀತ್ ಬುಮ್ರಾ!

ಸಿಡ್ನಿ| Krishnaveni K| Last Modified ಬುಧವಾರ, 13 ಜನವರಿ 2021 (10:21 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಡೆದಾಡಲೂ ಆಗದಂತ ಪರಿಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

 
ಕೆಳಹೊಟ್ಟೆನೋವಿಗೊಳಗಾಗಿರುವ ಬುಮ್ರಾ ಸ್ಥಿತಿ ದಯನೀಯವಾಗಿದೆ. ಅವರಿಗೆ ಸದ್ಯಕ್ಕೆ ನಡೆದಾಡಲೂ ಕಷ್ಟವಾಗುತ್ತಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ನಲ್ಲಿ ಆಡುತ್ತಿಲ್ಲ. ಇನ್ನು, ಹನುಮ ವಿಹಾರಿ ಕೂಡಾ ನಾಲ್ಕನೇ ಟೆಸ್ಟ್ ನಿಂದ ಹೊರುಗಳಿಯಲಿದ್ದಾರೆ. ಮಯಾಂಕ್ ಅಗರ್ವಾಲ್ ಸ್ಥಿತಿ ಏನೋ ಗೊತ್ತಾಗಿಲ್ಲ. ಒಟ್ಟಾರೆ ಹೆಚ್ಚಿನ ಆಟಗಾರರೂ ನೋವು ನಿವಾರಕದ ಬಲದಲ್ಲಿ ದಿನ ಕಳೆಯುತ್ತಿದ್ದು, ಅಂತಿಮ ಟೆಸ್ಟ್ ಗೆ ಆಡುವ ಫಿಟ್ ಆದ 11 ಕ್ರಿಕೆಟಿಗರನ್ನು ಹೊಂದಿಸುವುದೇ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :