Widgets Magazine

ತಲ್ವಾರ್ ನಿಂದ ಮನುಷ್ಯರನ್ನೂ ಕೊಲ್ಲಲು ಗೊತ್ತು: ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್

ಇಸ್ಲಾಮಾಬಾದ್| Krishnaveni K| Last Modified ಸೋಮವಾರ, 2 ಸೆಪ್ಟಂಬರ್ 2019 (07:49 IST)
ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಪಾಕಿಸ್ತಾನದ ಪುಂಡಾಟ ಮೇರೆ ಮೀರಿದೆ. ಇದೀಗ ಪಾಕ್ ಮಾಜಿ ಕ್ರಿಕೆಟಿಗ ಜಾವೇದ್‍ ಮಿಯಾಂದಾದ್ ಭಾರತಕ್ಕೆ ಎಚ್ಚರಿಕೆ ನೀಡುವ ಧೈರ್ಯ ಮಾಡಿದ್ದಾರೆ.

 
ಮೊದಲು ಬ್ಯಾಟ್ ನಿಂದ ಸಿಕ್ಸರ್ ಬಾರಿಸುತ್ತಿದ್ದೆ. ತಲ್ವಾರ್ ನಿಂದ ಮನುಷ್ಯರನ್ನು ಕೊಲ್ಲಲೂ ನಮಗೆ ಗೊತ್ತು ಎಂದು ಜಾವೇದ್ ಮಿಯಾಂದಾದ್ ಉದ್ದಟತನದ ಹೇಳಿಕೆ ನೀಡಿದ್ದಾರೆ.
 
‘ಕಾಶ್ಮೀರದ ಸಹೋದರರೇ ನೀವು ಭಯಪಡಬೇಕಾಗಿಲ್ಲ. ನನ್ನ ಬಳಿ ಬ್ಯಾಟ್ ಇದೆ, ಮೊದಲು ಸಿಕ್ಸರ್ ಬಾರಿಸುತ್ತಿದ್ದೆ, ಈಗ ತಲ್ವಾರ್ ಕೂಡಾ ಇದೆ, ಅದನ್ನೂ ಬಳಸಲೂ ಗೊತ್ತು’ ಎಂದು ಮಿಯಾಂದಾದ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :