ನವದೆಹಲಿ: ನ್ಯೂಜಿಲೆಂಡ್ ತಂಡವನ್ನು ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೇನ್ ವಿಲಿಯಮ್ಸನ್ ವೃತ್ತಿ ಜೀವನಕ್ಕೆ ಕಂಟಕ ಎದುರಾಗಿದೆ!ಕೇನ್ ನಾಯಕತ್ವವನ್ನು ಎದುರಾಳಿಗಳೂ ಕೊಂಡಾಡುತ್ತಿದ್ದಾರೆ. ಅವರ ಬ್ಯಾಟಿಂಗ್ ಕೂಡಾ ಉನ್ನತ ಮಟ್ಟದಲ್ಲೇ ಇತ್ತು. ಈ ಸಂದರ್ಭದಲ್ಲೇ ಅವರು ಕೆಲವು ಸಮಯ ಕ್ರಿಕೆಟ್ ನಿಂದ ದೂರವುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.ಕಾರಣ, ಟೆನಿಸ್ ಎಲ್ಬೋ ಸಮಸ್ಯೆ. ಈ ಹಿಂದೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಇದೇ ಸಮಸ್ಯೆ ಕಾಡಿತ್ತು. ಇದರಿಂದಾಗಿ ಬ್ಯಾಟಿಂಗ್ ಮಾಂತ್ರಿಕ