ರೋಹಿತ್ ಶರ್ಮಾಗೆ ಕೀಳು ಭಾಷೆಯಲ್ಲಿ ಪ್ರತಿಕ್ರಿಯಿಸಿದ ಕಂಗನಾ ಟ್ವೀಟ್ ಡಿಲೀಟ್

ಮುಂಬೈ| Krishnaveni K| Last Modified ಶುಕ್ರವಾರ, 5 ಫೆಬ್ರವರಿ 2021 (09:43 IST)
ಮುಂಬೈ: ಕೃಷಿ ಕಾಯ್ದೆ ಬಗ್ಗೆ ವಿದೇಶೀಯರು ಟ್ವೀಟ್ ಮಾಡಿರುವುದನ್ನು ವಿರೋಧಿಸಿ ಭಾರತೀಯ ಕ್ರಿಕೆಟಿಗರು ತಿರುಗೇಟು ಕೊಟ್ಟಿದ್ದು, ಭಾರತ ಒಗ್ಗಟ್ಟಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದರ ಬಗ್ಗೆ ಬಾಲಿವುಡ್ ನಟಿ ಕಂಗನಾ ರನಾವತ್ ಕೊಟ್ಟ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.  
> ರೋಹಿತ್ ಶರ್ಮಾ ತಮ್ಮ ಟ್ವೀಟ್ ನಲ್ಲಿ ಭಾರತ ಒಗ್ಗಟ್ಟಾಗಿದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಈಗ ಮುಖ್ಯ. ಕೃಷಿಕರು ನಮ್ಮ ದೇಶದ ಮುಖ್ಯ ಅಂಗ. ನಾವು ಒಗ್ಗಟ್ಟಾಗಿದ್ದರೇ ಪರಿಹಾರ ಸಾಧ‍್ಯ. ಭಾರತ ಒಗ್ಗಟ್ಟಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ‘ಈ ಕ್ರಿಕೆಟಿಗರಿಗೆಲ್ಲಾ ಏನಾಗಿದೆ? ಡೋಬಿಯ ನಾಯಿಗಳ ಹಾಗಾಡುತ್ತಿದ್ದಾರೆ? ಅತ್ತ ಮನೆಗೂ, ಇತ್ತ ಬೀದಿಗೂ ಉಪಯೋಗ ಇಲ್ಲದವರ ಹಾಗೆ? ಯಾಕೆ ಯಾರೂ ಕೃಷಿಕರಿಗೆ ಒಳ್ಳೆಯದಾಗುವ ಈ ಹೊಸ ಕಾಯಿದೆಯನ್ನು ಬೆಂಬಲಿಸಿ ಮಾತನಾಡುವ ಧೈರ್ಯ ಮಾಡುತ್ತಿಲ್ಲ’ ಎಂದು ಬರೆದುಕೊಂಡಿದ್ದರು. ಆದರೆ ಇದು ಅವಹೇಳನಕಾರಿ ಎಂಬ ಕಾರಣಕ್ಕೆ ಟ್ವಿಟರ್ ಈ ಟ್ವೀಟ್ ನ್ನು ಖುದ್ದಾಗಿ ಡಿಲೀಟ್ ಮಾಡಿದೆ.>


ಇದರಲ್ಲಿ ಇನ್ನಷ್ಟು ಓದಿ :